ಆರ್ದವಾತಾವರಣದಿಂದ ನೀರನ್ನು ಹೀರಿ ಕೊನೆಗೆ ಕರಗಿಹೋಗು ವಂಥ ಕೆಲವು ಸ್ಫಟಿಕೀಯ ರಾಸಾಯನಿಕಗಳ ಗುಣ (ಡೆಲಿಕ್ವೆಸೆನ್ಸ್). ಕ್ಯಾಲ್ಸಿಯಂ ಕ್ಲೋರೈಡ್ (CaCl2), ಸತುವಿನ ಕ್ಲೋರೈಡ್ (ZnCl2) ಉದಾಹರಣೆಗಳು. ಸ್ಫಟಿಕೀಯ ವಸ್ತು ನೀರನ್ನು ಹೀರುತ್ತದೋ ಇಲ್ಲವೋ ಎನ್ನುವುದು ಗಾಳಿಯಲ್ಲಿ ನೀರಿನ ಆವಿಯ ಒತ್ತಡ (ವೇಪರ್ ಪ್ರೆಷರ್), ಆ ವಸ್ತುವಿನ ಪರ್ಯಾಪ್ತ ದ್ರಾವಣದ (ಸ್ಯಾಚುರೇಟೆಡ್ ಸಲ್ಯೂಷನ್) ನೀರಿನ ಆವಿಯ ಒತ್ತಡ-ಇವುಗಳನ್ನು ಅವಲಂಬಿಸುತ್ತವೆ. ವಸ್ತು ನೀರಿನಲ್ಲಿ ವಿಲೀನವಾಗುವ ಗುಣ ಹೆಚ್ಚಾಗಿದ್ದಷ್ಟೂ ಅದು ಆರ್ದ್ರೀಕರಣ ತೋರುವುದು ಹೆಚ್ಚು. ಗಾಳಿಯಲ್ಲಿನ ಸಾಪೇಕ್ಷ ಆರ್ದತೆ (ರಿಲೇಟಿವ್ ಹ್ಯುಮಿಡಿಟಿ) ಶೇ.೩೦ ಭಾಗಕ್ಕೆ ಹೆಚ್ಚಾದಾಗ ಕ್ಯಾಲ್ಸಿಯಂ ಕ್ಲೋರೈಡ್ ಆರ್ದ್ರೀಕರಣ ತೋರುತ್ತದೆ. ಸಕ್ಕರೆ ಈ ಆರ್ದತೆ ಶೇ.೮೦ ಭಾಗಕ್ಕೆ ಹೆಚ್ಚಾದಾಗ ಆರ್ದ್ರೀಕರಣ ತೋರುತ್ತದೆ.	

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ